ಇವತ್ತು ಆದಿತ್ಯ ಎಂದಿಗಿಂತ ಮುಂಚೆನೇ ಅಂದರೆ 8:30 ಗೆಲ್ಲ ಹಠ ಮಾಡ್ತಿದ್ದ . ನಿದ್ದೆ ಬರ್ತಾ ಇತ್ತು ಪಾಪ ಅವನಿಗೆ . ಊಟ ಮಾಡಿಸಿ ಅವನನ್ನ ಮಲಗಿಸಕ್ಕೆ ಹೋದ ನಂದುಡಿಯರ್ ಅವರೇ ನಿದ್ದೆ ಮಾಡ್ಬಿಟ್ಟಿದ್ರು .
ನಂದು ಊಟ ಆಗಿದ್ರಿಂದ 12 ಘಂಟೆ ಗೋಸ್ಕರ ಕಾಯ್ತಾ ಇದ್ದೆ .ಅವಳು ಮಲಗಿದ ತಕ್ಷಣವೇ ಕಾರ್ನಲ್ಲಿ ಹೋಗಿ 1Kg cake ತೊಗೊಂಡು ,Archies ನಲ್ಲಿ ಎರಡು greetimng cards ತೊಗೊಂಡು ಬಂದೆ . ಒಂದು ಕಾರ್ಡ್ ನಲ್ಲಿ “Feel My Love “ ಅಂತ , ನನ್ನ ಯಾವುದಾದರು ಕವಿತೆಯ ಮೂಲಕ ಪ್ರೀತಿ ವ್ಯಕ್ತ ಪಡಿಸೋಣ ಅಂದ್ರೆ , ಹಾಳಾದ್ದು ಪದಗಳೇ ಹುಟ್ಟಲಿಲ್ಲ . ಘಂಟೆ 11 ಅಗೊಗಿದ್ರಿಂದ ಯೋಗರಾಜ್ ಭಟ್ಟರ ಹೊಸ ಚಿತ್ರದ 4 ಸಾಲುಗಳನ್ನು ಬರೆದೆ ಆ card ನಲ್ಲಿ .
ಎರಡನೇ card ನಲ್ಲಿ , birthday wishes ಬರೆದು , ನನ್ನ ಹಾಗು ನನ್ನ ಮಗುವಿನ ತಾಯಾದ ನನ್ನ ನಂದುಗೆ ಒಳ್ಳೆ ಅರೋಗ್ಯ ,ಆಯಸ್ಸು ಹರಸಿದೆ .ಅಡುಗೆ ಮನೆಗೆ ಹೋಗಿ knife , plate ಎಲ್ಲ ತಂದು table ready ಮಾಡಿಟ್ಟು , balloons ಕತ್ತೊದ್ರೊಳಗೆ 11:55 ಆಗಿತ್ತು .ಅವತ್ತು January 19th .20th ಗೆ Nandu alias Nandini – ನನ್ನ ನೆಚ್ಚಿನ ಮಡದಿಯ birthday .
ಮೇಲೆ ಹೋಗಿ ಮೆಲ್ಲ , ಮಗನಿಗೆ ಗೊತ್ತಾಗದ ಹಾಗೆ ಅವಳನ್ನ ಎಬ್ಬಿಸಿ ಕೆಳಗೆ ಕರ್ಕೊಂಡು ಬಂದೆ .ನನ್ನ arrangements ನೋಡಿ ಅವಳಿಗೆ ಆಶ್ಚರ್ಯ . ಮದುವೆಗೆ ಮುನ್ನ ಅವಳ birthday celebrate ಮಾಡಿದ್ದು ಬಿಟ್ರೆ , ನಂತರದ ಎರಡೂ b’days ಆಚರಿಸಕ್ಕೆ ಆಗಿರಲಿಲ್ಲ .
ನಂದು ಹತ್ರ cake cut ಮಾಡಿಸಿ , ಅವಳಿಗೆ cake ತಿನ್ನಿಸಿ , ಹಣೆ ಮೇಲೆ ಸಣ್ಣ ಮುತ್ತಿತ್ತು , ಹುಟ್ಟು ಹಬ್ಬದ ಶುಭಾಷಯ ಕೋರಿದೆ . ಹಾಗೆ ತಂದ ಎರಡೂ ಕಾರ್ಡ್ಸ್ ಅವಳಿಗೆ ಕೊಟ್ಟೆ . ಅವಳಿಗೆ ತುಂಬ ಇಷ್ಟವಾದ , ಕಳೆದ ವಾರ ಅವಳೇ ಖುದ್ದು ಆಯ್ದ Diamond Necklace ಅನ್ನು ಉಡುಗೊರೆ ರೂಪದಲ್ಲಿ ಕೊಟ್ಟು ಅವಳ ಮುಖದ ಸಂತಸವನ್ನು ನೋಡಿ ನಾನು ಸಂಬ್ರಮಿಸಿದೆ .
“ಎರಡು ವರ್ಷದಲ್ಲಿ ಇಲ್ಲದ ಪ್ರೀತಿ ,celebration ಇವಾಗ್ಯಾಕೆ ” ಅಂತ ಮೂಗು ಮುರಿದಳು ನನ್ನ ಅರ್ಧಾಂಗಿ (ಹುಸಿ ಕೋಪದ ನಾಟಕ ) . ಅದಕ್ಕೆ, ತಕ್ಷಣ ಇರೋ ಬರೋ ಬುದ್ಧಿನೆಲ್ಲ ಉಪಯೋಗಿಸಿ , ಅದಕ್ಕೇ ನಂದು ಈ ಎರಡು card ಹಾಗು ಎರಡು ಗಿಫ್ಟು – “ಒಂದು diamond necklace , ಇನ್ನೊಂಧು ಅದಕ್ಕಿಂತಾ ಸುಂದರ ವಾಗಿರುವ ಆದಿ “ ಎನ್ನಲು ನಾಚಿ ನೀರಾದಳು ನನ್ನಾಕೆ .
Aaditya – ಆರು ತಿಂಗಳ ಹಿಂದೆ ಭೂಮಿಗೆ ಬಂದು , ನಮ್ಮಿಬ್ಬರ ಬಾಳನ್ನು ಹರಸಿದ ಮಗು .
Friday, July 30, 2010
Thursday, July 29, 2010
puttaputta hejjegalu
ಆ ಪುಟ್ಟ ಪುಟ್ಟ ಹೆಜ್ಜೆಗಳು, ಅಲ್ಪ ಸ್ವಲ್ಪ ಮಾತ್ರ ಅರ್ಥವಾಗುವ ತೊದಲ್ನುಡಿ , ಮೈ ಮೇಲಿನ ಅಲ್ಪ ಸ್ವಲ್ಪ ಬಟ್ಟೆ ,ಎಳೆಯ ಸುಂದರ ಹೊಳಪಿನ ಚರ್ಮ, ಕೆಂಪನೆ ಚಿಗುರಿನಂಥಾ ಬೆರಳುಗಳು , ಹೊಳೆಯುವ ತುಟಿಗಳಲಿ ಮುಗ್ಧ ಮಂದಹಾಸ , ಯಾವೊಂದು ಕೊಂಕೂ ಅರಿಯದ ಮುಗ್ಧ ಮನೋಭಾವ , ಮನೆ ಮಂದಿಗೆಲ್ಲ ಪ್ರೀತಿಯ ಅಕ್ಕರೆಯ ಮುದ್ದಿನ ಕಂದಮ್ಮ ,ಎಲ್ಲರಿಗೂ ಅಚ್ಚು ಮೆಚ್ಚು .
ಪುಟ್ಟ ಪುಟ್ಟ ತೊಡಕು ಹೆಜ್ಜೆಗಳನ್ನು ಇದ್ಹುತಿರುವ ಕಂದಮ್ಮ ಎಲ್ಲಿ ಬಿದ್ದುಬಿಡುತ್ಹೋ ಎಂಬ ಭಯದಿಂದ ಹಿಡಿಯಲು ಬರುವ ಅದರ ತಾಯಿ , ಅಂದರೆ ನನ್ನ ಸೊಸೆಯನ್ನು ನೋಡಿದಾಗಲೆಲ್ಲ ನಾನೂ ಮಗುವಾಗಿ ಹೋಗಿರುತೇನೆ.
ಅಂದಿನ ನೆನಪುಗಳ ಚಿತ್ರ ಹಾಗೆ ಕಣ್ಮುಂದೆ ಚಲಿಸ ತೊಢಗುತ್ತೆ . ಬಾಲ್ಯದ ಈ ಎಲ್ಲ ಅವಸ್ಥೆಗಳು ನೆನಪಿರದೆ ಇರಬಹುದು , ಹಾಗೆ ಎಲ್ಲವನ್ನು ನೆನಪಿಟ್ಟುಕೊಳ್ಳುವ ವಯಸ್ಸೂ ಅದಲ್ಲ .ಆದರೆ ಅಂತ ಎಲ್ಲ ಹಂತಗಳನ್ನು ದಾಟಿಯೇ ಇಷ್ಟುದೂರ ಸಾಗಿ ಅಜ್ಜಿಯ ಪಟ್ಟಕ್ಕೆ ಬಂದಿರುವೆನು .
ಹೀಗೆ ಪುಟ್ಟ ಪುಟ್ಟ ಹೆಜ್ಜೆಗಳನಿಡುತ್ತಾ ಪ್ರಾರಂಬಿಸಿದ ನನ್ನ ಬದುಕನ್ನು ಮೊಮ್ಮಕ್ಕಳ ಕೈ ಹಿಡಿದು ನಡೆಸಿ , ಅವರ ಪುಟ್ಟ ಪುಟ್ಟ ಹೆಜ್ಜೆಗಳ ಗೆಜ್ಜೆ ಸದ್ದನ್ನು ಆಲಿಸಿ ಸಂತೋಷ ಪದ್ದುತಿದ್ದೇನೆ.ಇಂದೆನೋ ಎಲ್ಲ ನೆಮ್ಮದಿ , ಆದರೆ ಆ ನಿನ್ನೆ ಇಂದುಗಳ ನಡುವೆ ನೋವು ನಲಿವು ಎರಡೂ ಅಡಗಿ ಕುಳಿತಿದೆ . ಇದೇ ಬದುಕು !!!
ಕೃಪೆ ,
ಲವಲvk

Subscribe to:
Posts (Atom)