Thursday, July 29, 2010

puttaputta hejjegalu

ಆ ಪುಟ್ಟ ಪುಟ್ಟ ಹೆಜ್ಜೆಗಳು, ಅಲ್ಪ ಸ್ವಲ್ಪ ಮಾತ್ರ ಅರ್ಥವಾಗುವ ತೊದಲ್ನುಡಿ , ಮೈ ಮೇಲಿನ ಅಲ್ಪ ಸ್ವಲ್ಪ ಬಟ್ಟೆ ,ಎಳೆಯ ಸುಂದರ ಹೊಳಪಿನ ಚರ್ಮ, ಕೆಂಪನೆ ಚಿಗುರಿನಂಥಾ ಬೆರಳುಗಳು , ಹೊಳೆಯುವ ತುಟಿಗಳಲಿ ಮುಗ್ಧ ಮಂದಹಾಸ , ಯಾವೊಂದು ಕೊಂಕೂ ಅರಿಯದ ಮುಗ್ಧ ಮನೋಭಾವ , ಮನೆ ಮಂದಿಗೆಲ್ಲ ಪ್ರೀತಿಯ ಅಕ್ಕರೆಯ ಮುದ್ದಿನ ಕಂದಮ್ಮ ,ಎಲ್ಲರಿಗೂ ಅಚ್ಚು ಮೆಚ್ಚು .
ಪುಟ್ಟ ಪುಟ್ಟ ತೊಡಕು ಹೆಜ್ಜೆಗಳನ್ನು ಇದ್ಹುತಿರುವ ಕಂದಮ್ಮ ಎಲ್ಲಿ ಬಿದ್ದುಬಿಡುತ್ಹೋ ಎಂಬ ಭಯದಿಂದ ಹಿಡಿಯಲು ಬರುವ ಅದರ ತಾಯಿ , ಅಂದರೆ ನನ್ನ ಸೊಸೆಯನ್ನು ನೋಡಿದಾಗಲೆಲ್ಲ ನಾನೂ ಮಗುವಾಗಿ ಹೋಗಿರುತೇನೆ.
ಅಂದಿನ ನೆನಪುಗಳ ಚಿತ್ರ ಹಾಗೆ ಕಣ್ಮುಂದೆ ಚಲಿಸ ತೊಢಗುತ್ತೆ . ಬಾಲ್ಯದ ಈ ಎಲ್ಲ ಅವಸ್ಥೆಗಳು ನೆನಪಿರದೆ ಇರಬಹುದು , ಹಾಗೆ ಎಲ್ಲವನ್ನು ನೆನಪಿಟ್ಟುಕೊಳ್ಳುವ ವಯಸ್ಸೂ ಅದಲ್ಲ .ಆದರೆ  ಅಂತ ಎಲ್ಲ ಹಂತಗಳನ್ನು ದಾಟಿಯೇ ಇಷ್ಟುದೂರ ಸಾಗಿ ಅಜ್ಜಿಯ ಪಟ್ಟಕ್ಕೆ ಬಂದಿರುವೆನು .
ಹೀಗೆ ಪುಟ್ಟ  ಪುಟ್ಟ ಹೆಜ್ಜೆಗಳನಿಡುತ್ತಾ ಪ್ರಾರಂಬಿಸಿದ ನನ್ನ ಬದುಕನ್ನು ಮೊಮ್ಮಕ್ಕಳ ಕೈ ಹಿಡಿದು ನಡೆಸಿ , ಅವರ ಪುಟ್ಟ ಪುಟ್ಟ ಹೆಜ್ಜೆಗಳ ಗೆಜ್ಜೆ ಸದ್ದನ್ನು ಆಲಿಸಿ ಸಂತೋಷ ಪದ್ದುತಿದ್ದೇನೆ.ಇಂದೆನೋ ಎಲ್ಲ ನೆಮ್ಮದಿ , ಆದರೆ ಆ ನಿನ್ನೆ ಇಂದುಗಳ ನಡುವೆ ನೋವು ನಲಿವು ಎರಡೂ ಅಡಗಿ ಕುಳಿತಿದೆ . ಇದೇ ಬದುಕು !!!
                                                        ಕೃಪೆ ,
                                                              ಲವಲvk

No comments:

Post a Comment

Kathaamaalike