Wednesday, August 7, 2013

Significance of Upanayana Karma

ಉಪನಯನ ಅಂದರೆ ಅಂತಃ ಚಕ್ಶುವನ್ನು ತೆರೆಯುವುದು , ಹಾಗೆ ತೆರೆಯಲು ಬೇಕಾದ ಗುರುವನ್ನು ಆಯ್ದುಕೊಳ್ಳುವುದು , ಅಭ್ಯಾಸಿಸುವುದು .

ಯಾಕೆ :
ಪ್ರತಿ ಮನುಷ್ಯನು ಹುಟ್ಟುವಾಗ ಶುದ್ರನಾಗಿ ಅಂದರೆ ಕೇವಲ ಬಾಹ್ಯ ದೇಹವನ್ನು ಅರಿತು ಅದನ್ನು ಶುಚಿಯಾಗಿ ಇಟ್ಟುಕೊಳ್ಳುವುದನ್ನು ತಿಳಿಯುತ್ತಾನೆ . ಆದರೆ ಉಪನಯನ ಅನಂತರ ಅವನು ದ್ವಿಜ ಅಂದರೆ ಎರಡನೆ ಜನ್ಮ ತಳೆದು ತನ್ನ ಒಳಗಿನ ದೇಹವನ್ನು ( ಆತ್ಮ) ಅರಿಯಲು ಪ್ರಯಥ್ನಿಸುತ್ಹ್ಥಾನೆ . ಅವನ ಈ ಜನ್ಮದಲ್ಲಿ "ಸಾವಿತ್ರಿ " ತಾಯಿ ಯಾಗಿಯೂ ,ಗುರುವು ತಂದೆಯಾಗಿಯೂ ಇರುತ್ಹಾರೆ .

ಯಾವಾಗ :
ಬ್ರಾಹ್ಮಣ ನ ಮಗುವಾಗಿ ಜನಿಸಿದವರು ಎಂಟನೇ ವರುಷ ,ಕ್ಷತ್ರಿಯನ ಮಗುವಾಗಿ ಜನಿಸಿದವರು ಹನ್ನೊಂದನೇ ವರುಷ, ವ್ಯಶ್ಯನ ಮಗುವಾಗಿ ಜನಿಸಿದವರು ಹನ್ನೆರಡನೇ ವರುಷ ಹಾಗೂ ಶುದ್ರನ ಮಗುವಾಗಿ ಜನಿಸಿದವರು ೧೬ನೇ ವರುಷ ಮಾಡಿಕೊಳ್ಳ ಬಹುದು .
ಕಾರಣ : ಉಪನಯನದ ವಟುವಿನ "ಸತ್ತ್ವ " ಗುಣ ಕನಿಷ್ಠ 30% ಇರಬೇಕು ಎಂಬ ನಿಯಮವಿದೆ . ಇದಕ್ಕನುಸಾರವಾಗಿ ಆಯಾ ಪಂಗಡದ ಭೋಜನ ಶ್ಯಲಿಯನ್ನು ಗಮನದಲ್ಲಿಟ್ಟುಕೊಂಡು , ಈ ಮಾಪನ ತಯಾರಾದದ್ದು .

ಯಾರು:
ವೇದಾಭ್ಯಾಸ ಮಾಡಲು ಇಚ್ಚಿಸುವ ಯಾವುದೇ ಜೀವಿಗೆ  ಈ ಕರ್ಮ ಅನ್ವಯಿಸುತ್ತದೆ . ಸ್ತ್ರೀಯರೂ ಸೇರಿ .

ತಯಾರಿ :
ನಿರ್ಧರಿತ ದಿನಕ್ಕಿಂತ ೩ ದಿನ ಮುಂಚಿತವಾಗಿಯೇ ವಟುವು ಕೇವಲ ಹಾಲಿನ ಪಥ್ಯದಲ್ಲಿ ಇರಬೇಕು ..ಇದೂ ಕೂಡ ಅವನ ಸತ್ವ ಗುಣವನ್ನು ಹೆಚ್ಚಿಸಲು ಮಾತ್ರ .

ಯದ್ನೋಪವಿತ್ರಧರಣೆ :
ಪವಿತ್ರ ಧಾರ 9 ಧಾರಗಳಿಂದ ಕೂಡಿದದಾಗಿದ್ದು ,೯ ದೇವರ ಪ್ರತೀಕ : ಓಂಕಾರ ,ಅಗ್ನಿ ,ನಾಗ,ಚಂದ್ರ ,ಪಿತೃ ,ಪ್ರಜಾಪತಿ ,ವಾಯು,ಯಮ ,ವಿಶ್ವ ದೇವತೆ
ಋಗ್ವೇದ ,ಯಜುರ್ವೇದ ಮತ್ತು ಸಾಮವೇದದ ಪ್ರತೀಕ ವಾಗಿ , ಈ ಧಾರವನ್ನು ೩ ಎಳೆ ಗಳಾಗಿ ಮಾಡಲಾಗುತ್ತದೆ .
ಈ ಮೂರು ಎಳೆಗಳು ಬ್ರಹ್ಮಚರ್ಯ ,ಗೃಹಸ್ಥ ಮತ್ತು ವಾನಪ್ರಸ್ಥಾಶ್ರಮ ದ ಪ್ರತೀಕವೂ ಹೌದು .
ಇದರ ಮೇಲೆ ಹಾಕುವ ಬ್ರಹ್ಮಗಂಟು ಅಥರ್ವವೇದದ ಪ್ರತೀಕ ಎನ್ನುತ್ತಾರೆ .

ಧ್ಯಾನ ,ಭಕ್ತಿ ಹಾಗು ಕರ್ಮಗಳ ಮೂಲಕ ಭಗವಂತನ ಸಾಕ್ಷಾತ್ಕಾರ ಆಗುವುದರ ಪ್ರತೀಕವೂ ಹೌದು .. ಬ್ರಹ್ಮಚಾರಿ ಅಲ್ಲದವನು ೨ ಜನಿವಾರ ಹಾಕಿಕೊಳ್ಳಲು ಕಾರಣ ,ಅವನು ತನ್ನ ಮತ್ತು ತನ್ನ ಪತ್ನಿಯ  ಇಬ್ಬರ ಆಧ್ಯಾತ್ಮಿಕ ಪ್ರಗತಿಗೆ ಕಾರಣನು ಎಂದು ಸೂಚಿಸಲು .

ಧಂಡ ಧಾರಣೆ :
ವಟುವು ಸರಿಧಾರಿಯಲ್ಲಿ ನಡೆಯುವಾಗ ಬರುವ ಶತ್ರುಗಳಿಗೆ ಭಯ ಹುಟ್ಟಿಸಲು ಹಾಗೂ ಪ್ರಕೃತಿ ಯಲ್ಲಿರಬಹುದಾದ ನಕಾರಾತ್ಮಕ ಶಕ್ತಿಯನ್ನು ಸಕಾರಾ ತ್ಹ್ಮಕವಾಗಿಸಲು ಸಹಕಾರಿ



No comments:

Post a Comment

Kathaamaalike